Thursday, January 12, 2017

ಎಂಥಾ ಹದವಿತ್ತೇ? ಹರೆಯಕೆ ಏನು ಮುದವಿತ್ತೇ

ಸಂಕಲನ - ಗೊತ್ತಿಲ್ಲ
ಸಾಹಿತ್ಯ - ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಹಾಡುಗಾರ - ಸುಲೋಚನ
ಸಂಗೀತ - ಗೊತ್ತಿಲ್ಲ

ಎಂಥಾ ಹದವಿತ್ತೆ? ಹರೆಯಕೆ ಏನು ಮುದವಿತ್ತೆ!!
ಅಟ್ಟೀ ಹಿಡಿದು, ಮುಟ್ಟೀ ತಡೆದು, ಗುಟ್ಟೂ ಸವಿಯಿತ್ತೆ!!
ಗೆಳತಿ ||ಪ||

ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೆ
ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೆ ಕಾಡಿತ್ತೆ
ಅಣ್ಣನ ಕೀಟಲೆ ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ ||೧||

ಎಂಥಾ ಹದವಿತ್ತೆ? ಹರೆಯಕೆ ಏನು ಮುದವಿತ್ತೆ!!
ಅಟ್ಟೀ ಹಿಡಿದು, ಮುಟ್ಟೀ ತಡೆದು, ಗುಟ್ಟೂ ಸವಿಯಿತ್ತೆ!!
ಗೆಳತಿ

ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೆ
ಮೆಲ್ಲನೆ ಉಸಿರಿದ ಸೊಲ್ಲಿನ ರುಚಿಯು ಬೆಲ್ಲವ ಮೀರಿತ್ತೆ
ಸುಳ್ಳೇ ನೆರಿಗೆಯ ಚಿಮ್ಮುವ ನಡಿಗೆಗೆ ಬಳ್ಳಿಯ ಬೆಡಗಿತ್ತೆ ||೨||

ಎಂಥಾ ಹದವಿತ್ತೆ? ಹರೆಯಕೆ ಏನು ಮುದವಿತ್ತೆ!!
ಕಾಣದ ಕೈಯಿ ಎಲ್ಲಾ ಕದ್ದು ಉಳಿಯಿತು ನೆನಪಷ್ಟೆ ||

ಎಂಥಾ ಹದವಿತ್ತೆ?
ಗೆಳತಿ
ಎಂಥಾ ಮುದವಿತ್ತೆ!!

No comments:

Post a Comment